ನಮ್ಮ ಪರಿಸರ – ಸಾಲುಮರಗಳು

ನಮ್ಮ ಪರಿಸರ – ಸಾಲುಮರಗಳು

125.00

Author: ಟಿ. ಎಸ್. ಶ್ರೀನಿವಾಸ ಮತ್ತು ಕಾರ್ತಿಕೇಯನ್ ಎಸ್.

Pages: 144

Size: Pocket size

Format: Full colour

Description

ನಮ್ಮ ಪರಿಸರ – ಸಾಲುಮರಗಳು

ಟಿ. ಎಸ್. ಶ್ರೀನಿವಾಸ ಮತ್ತು ಕಾರ್ತಿಕೇಯನ್ ಎಸ್.

ಹೂದಳೆದು ನಿಂತ ಅಶೋಕ, ಕದಂಬ, ಜಕರಾಂಡ ಅಥವಾ ಗುಲ್ ಮೊಹರ್ ಮರದ ಸೌಂದರ್ಯ, ಸಂಪಿಗೆಯ ಸೌರಭ ಅಥವಾ ಹೊಂಗೆಯ ನೆರಳು ನಮ್ಮ ಸುತ್ತಲಿನ ಪರಿಸರ ಹಾಗು ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿವೆ ಎಂದರೆ ಉತ್ಪ್ರೇಕ್ಷೆಯಲ್ಲ. ಆದರೆ ಮರಗಳ ಉಪಯುಕ್ತತೆ ಇಷ್ಟಕ್ಕೇ ಸೀಮಿತವಲ್ಲ. ನಗರ ಪ್ರದೇಶಗಳಲ್ಲಿ ಮರಗಳ ಪ್ರಾಮುಖ್ಯತೆಗೆ ಹಲವಾರು ಆಯಾಮಗಳಿದ್ದು, ಅವುಗಳಿಂದ ನಮಗೆ ಮತ್ತು ಪರಿಸರಕ್ಕಾಗುವ ಪ್ರತ್ಯಕ್ಷ ಹಾಗು ಪರೋಕ್ಷ ಪ್ರಯೋಜನಗಳಿಗೆ ಬೆಲೆಕಟ್ಟುವುದು ಅಸಾಧ್ಯ. ಮರಗಳ ವೈವಿಧ್ಯತೆ ಮತ್ತು ಸಂಖ್ಯೆ ಹೆಚ್ಚಾದಂತೆ ಆ ಪರಿಸರದಲ್ಲಿ ಇತರ ಜೀವಿಗಳ ವೈವಿಧ್ಯತೆಯೂ ಹೆಚ್ಚಾಗುತ್ತದೆ. ಹೀಗಾಗಿ ನಗರಪ್ರದೇಶಗಳಲ್ಲಿ ಮರಗಳನ್ನು ಸಂರಕ್ಷಿಸುವುದು ಮತ್ತು ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ನಮ್ಮ ಸುತ್ತಲಿನ ಸಾಲುಮರಗಳ ಬಗ್ಗೆ ಅರಿವು, ಆಸಕ್ತಿ ಮೂಡಿಸಿ ಅವುಗಳ ಸಂರಕ್ಷಣೆಯಲ್ಲಿ ಕಾರ್ಯಪ್ರವೃತ್ತರಾಗುವಂತೆ ಉತ್ತೇಜಿಸುವುದು ಅತ್ಯವಶ್ಯಕ. ಈ ಪ್ರಯತ್ನಕ್ಕೆ ಪೂರಕವಾಗುವಂತೆ ಸೂಕ್ತ ಮಾಹಿತಿಯಿರುವ ಕನ್ನಡ ಭಾಷೆಯ ಕೈಪಿಡಿಯ ಅಗತ್ಯವನ್ನು ಮನಗಂಡು ಈ ಪುಸ್ತಕವನ್ನು ಪ್ರಕಟಿಸಲಾಗಿದೆ.

ಸಾಮಾನ್ಯವಾಗಿ ಬೆಳೆಸಲಾಗುವ ೫೦ ಪ್ರಬೇಧದ ಸಾಲುಮರಗಳ ಬಗ್ಗೆ ಸಚಿತ್ರ, ಸರಳ ಹಾಗೂ ಸಂಕ್ಷಿಪ್ತ ಮಾಹಿತಿಯುಳ್ಳ ಈ ಕೈಪಿಡಿಯನ್ನು ವಿದ್ಯಾರ್ಥಿಗಳು ಮತ್ತು ಪರಿಸರಾಸಕ್ತರಿಗೆ ಉಪಯುಕ್ತವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಮರಗಳನ್ನು ಸುಲಭವಾಗಿ ಗುರುತಿಸಲು ಸಹಾಯವಾಗುವಂತೆ ಹೂಗಳ ವರ್ಣದ ಆಧಾರದಲ್ಲಿ ವರ್ಗೀಕರಿಸಿ, ಚಿತ್ರಸೂಚಿಗಳೊಂದಿಗೆ ಸಾಮಾನ್ಯ ಗುಣ-ಲಕ್ಷಣಗಳು, ಹೂದಳೆಯುವ ಋತುಮಾನ ಹಾಗೂ ಹೂಗಳ ಪರಿಮಳದ ಮಾಹಿತಿಯನ್ನು ನೀಡಲಾಗಿದೆ. ಪ್ರತಿ ಪ್ರಬೇಧದ ಮರದ ಗುಣ-ಲಕ್ಷಣಗಳು ಹಾಗೂ ವಿಶೇಷತೆಗಳ ಸಂಕ್ಷಿಪ್ತ ಪರಿಚಯದ ಜೊತೆಗೆ ಕೆಳಕಂಡ ಅಂಶಗಳ ಬಗೆಗೂ ಉಪಯುಕ್ತ ಮಾಹಿತಿಯನ್ನೂ ಪಡೆಯಬಹುದು.

  • ಎಲೆಗಳ ವಿನ್ಯಾಸ ಮತ್ತು ಜೋಡಣೆ
  • ಫಲಗಳ ಛಾಯಾಚಿತ್ರಗಳು
  • ಮರದ ಎತ್ತರ ಹಾಗೂ ವಿಸ್ತಾರ
  • ಅವಲಂಬಿತ ಜೀವಜಾಲ
  • ಸ್ಥಳಾವಕಾಶ ಹಾಗೂ ಉದ್ದೇಶಕ್ಕನುಗುಣವಾಗಿ ಸೂಕ್ತ ಪ್ರಬೇಧದ ಮರಗಳ ಆಯ್ಕೆ
  • ಸಸಿಗಳನ್ನು ನೆಡುವ ವಿಧಾನ
  • ಪಾರಿಭಾಷಿಕ ಪದಕೋಶ

ಸುಲಭ ಬೆಲೆಯಲ್ಲಿ ಲಭ್ಯವಿರುವ, ಅತ್ಯುತ್ತಮ ಛಾಯಾಚಿತ್ರಗಳು ಹಾಗು ಉನ್ನತ ಶ್ರೇಣಿಯ ಮುದ್ರಣವಿರುವ ಈ ಕೈಪಿಡಿಯು ನಮ್ಮಸುತ್ತಲಿನ ಮರಗಳ ಬಗ್ಗೆ ಕಾಳಜಿ ಮತ್ತು ಕಳಕಳಿಯುಳ್ಳ ಎಲ್ಲರಿಗೂ ಅತ್ಯುಪಯುಕ್ತ.

Additional information

Weight 0.210 kg
Go to Top